ಸೈಕಲ್ ಏರಿ ಸೇತುವೆಯಿಂದ ಬಿದ್ದೆ....!
ಮಧ್ಯಾಹ್ನ ನಮ್ಮ ಮನೆಯ ಹತ್ತಿರದಲ್ಲಿರುವ ಪುರುಷಣ್ಣ ಮನೆಗೆ ಬಂದು "ಭಟ್ರು ಹೇಗಿದ್ದಾರೆ?" ಎಂದು ಅಮ್ಮನ ಜೊತೆ ಕೇಳಿದರು. ಅದಕ್ಕೆ ಅಮ್ಮ "ಅವನಿಗೆ ಏನಾಗಿದೆ? ಸೋಫಾದಲ್ಲಿ ಮಲಗಿದ್ದಾನೆ. ಅರ್ಧಗಂಟೆ ಆಯಿತು" ಎಂದು ಹೇಳಿದಾಗ,"ನಿಮಗೆ ವಿಷಯವೇ ಗೊತ್ತಿಲ್ಲವಾ..?ಅಶ್ವತ್ಥ ಮುಕ್ಕಾಲು ಗಂಟೆಯ ಹಿಂದೆ ಸಂಕದಿಂದ ಕೆಳಗಡೆ ಬಿದ್ದಿದ್ದಾನೆ. ಸೈಕಲ್‌ನಲ್ಲಿ ಸಿಕ್ಕಾಪಟ್ಟೆ ಫಾಸ್ಟ್ ಬಂದು ಬಿದ್ದಿದ್ದಾನಂತೆ. ಅಲ್ಲೇ ಬೇಲಿ ರಿಪೇರಿ ಮಾಡುತ್ತಿದ್ದ ವಿಶ್ವಣ್ಣ ಅವನನ್ನು ಮತ್ತು ಸೈಕಲ್ ನ್ನು ಮೇಲೆ ಎತ್ತಿ ಕಳುಹಿಸಿದ್ದಾರೆ. ಈಗ ಅವರು ಫೋನ್ ಮಾಡಿ ಅಶ್ವತ್ಥ ಹೇಗಿದ್ದಾನೆ ಎಂದು ಕೇಳಿದ್ದರು. ಅದಕ್ಕೆ ನಾನು ಅವನನ್ನು ನೋಡಲು ಬಂದಿದ್ದೇನೆ. ನಿಮಗೆ ಅವನು ಏನು ಹೇಳಲಿಲ್ಲವಾ..? ಎಂದು ಮರು ಪ್ರಶ್ನೆ ಹಾಕಿದರು..
ಅವರು ಈ ರೀತಿ ಹೇಳಿದ ಕೂಡಲೇ ಮಿಷಿನ್‌ನಲ್ಲಿ ಬಟ್ಟೆ ಹೊಲಿಯುತ್ತಿದ್ದ ಅಮ್ಮ ಎದ್ದು ಬಂದು ಸೋಫಾದಲ್ಲಿ ನಿದ್ದೆ ಬಂದವರಂತೆ ನಟಿಸುತ್ತಿದ್ದ ನನ್ನನ್ನು ಎಬ್ಬಿಸಿ," ಏನ್ ಮಾಡಿದೀಯಾ , ಎಲ್ಲಿ ಪೆಟ್ಟಾಗಿದೆ. ಕಾಲು ಕೈ ತೋರಿಸು ನೋಡುವಾ..?" ಎಂದು ಕೇಳಿದಾಗ ನಾನು," ಏನು ಆಗಿಲ್ಲ. ಸ್ವಲ್ಪ ಪೆಟ್ಟಾಗಿದೆ. ಕಾಲು ಸ್ವಲ್ಪ ಉಳುಕಿದೆ" ಎಂದು ಹೇಳಿ ನಡೆದ ವಿಷಯವನ್ನು ತಿಳಿಸಿ ಅವರ ಟೆನ್ಶನ್ ಕಡಿಮೆ ಮಾಡಿದೆ.
ಸಣ್ಣ ವಯಸ್ಸಿನಲ್ಲೇ 'ರೈಲು' ಬಿಡಲು ಗೊತ್ತಿದ್ದರೂ, ಸೈಕಲ್ ಬಿಡಲು ಆರಂಭಿಸಿದ್ದು ಹೈಸ್ಕೂಲ್ ಸೇರಿದ ಮೇಲೆ. ಆದರೆ 10 ನೇ ತರಗತಿಗೆ ಬಂದಾಗ ಸೈಕಲ್ ರೇಸ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ಎಲ್ಲರ ಮುಂದೆ ಬಹುಮಾನ ಪಡೆದು ಮಿಂಚಬೇಕೆಂಬ ಮಹತ್ವಕಾಂಕ್ಷೆಯ ಯೋಜನೆ ರೂಪಿಸಿದ್ದರಿಂದ ಪ್ರತಿದಿನ ಸಂಜೆ ನಿರಂತರ ಅಭ್ಯಾಸ ಮಾಡುತ್ತಿದ್ದೆ.
ನಮ್ಮ ಊರಿನ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡುವ ಸೇತುವೆ ರಸ್ತೆ ರಾಜ್ಯ ಹೆದ್ದಾರಿಯಿಂದ ಸ್ವಲ್ಪ ದೂರ ಇದೆ. ಈ ಸೇತುವೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಕಟ್ಟಿಸಿದ ಕಾರಣ ಇಲ್ಲಿ ವಾಹನಗಳ ಸಂಚಾರ ಇಲ್ಲ. ವಾಹನ ಬಂದರೂ ಆ ವ್ಯಕ್ತಿಯ ಮನೆಗೆ ಹೋಗುವ , ಬರುವ ವಾಹನಗಳು ಬಿಟ್ಟರೆ ಬೇರೆ ಯಾವುದೇ ವಾಹನಗಳು ಬರುವುದಿಲ್ಲ. ಹೀಗಾಗಿ ನಮ್ಮ ಸಾಧನೆಗೆ ಈ ರಸ್ತೆಯೇ ಸೂಕ್ತ ಎಂದು ಭಾವಿಸಿ ಪ್ರತಿದಿನವೂ ಅಭ್ಯಾಸ ಮಾಡುತ್ತಿದ್ದೆ.
ನಮ್ಮ ಸೇತುವೆಯ ಪ್ರದೇಶ ಸ್ವಲ್ಪ ಇಳಿಜಾರಿನಲ್ಲಿದೆ. ಇಳಿಜಾರಿನಲ್ಲಿ ವೇಗವಾಗಿ ಹೋಗುವಾಗ ಕಿವಿಗೆ 'ಗುಯ್' ಅಂತ ಶಬ್ಧ ಕೇಳುತ್ತದೆ ನೋಡಿ. ಈ ಶಬ್ಧ ಮತ್ತಷ್ಟು ಜಾಸ್ತಿ ಆಗಬೇಕು ಎಂದು ಭಾವಿಸಿ ಪೆಡಲ್ ತುಳಿದಾಗ ಚಕ್ರ 'ರುಯ್ ರುಯ್ ರುಯ್' ಅಂತ ಹೋಗಿದ್ದೇ ಹೋಗಿದ್ದು ಸೈಕಲ್‌ನೊಂದಿಗೆ ನಾನು 15 ಅಡಿಯ ಸೇತುವೆ ಕೆಳಗೆ ಬಿದ್ದೆ ಬಿಟ್ಟೆ. ಸೈಕಲ್ ಅಭ್ಯಾಸಕ್ಕೆ ಹೋಗುವ ಮುನ್ನ ಟ್ಯೂಬ್ ಗೆ ಫುಲ್ ಗಾಳಿ ಹಾಕಿದ್ದೆ. ಹೀಗಾಗಿ ಸೈಕಲ್ ಕಲ್ಲಿನ ಮೇಲೆ ಬಿದ್ದ ಕೂಡಲೇ ಜಿಮ್ನಾಸ್ಟಿಕ್ ನಲ್ಲಿ ಕ್ರೀಡಾಪಡುಗಳು ಹೇಗೆ ಹಾರುತ್ತಾರೋ ಅದೇ ರೀತಿ ಒಂದು ಸಲ ಸೈಕಲ್ ಮೇಲಕ್ಕೆ ಹಾರಿ ನಾನು ಬಲ್ಲೆಗೆ ಬಿದ್ದು ಬಿಟ್ಟೆ.
ಕಲ್ಲುಗಳ ಮೇಲೆ ಬಿದ್ದ ಸೈಕಲ್ ನ್ನು ನೋಡಿದಾಗ ರಿಮ್ ಬೆಂಡ್ ಆಗಿತ್ತು. ಹ್ಯಾಂಡಲ್ ಉಲ್ಟಾ ಆಗಿತ್ತು. ಮುಂದುಗಡೆಯ ಟಯರ್ ಪಂಚರ್ ಆಗಿತ್ತು. ಒಟ್ಟಿನಲ್ಲಿ ಸೈಕಲ್ ಶೇಪ್ ಔಟ್ ಆಗಿತ್ತು. ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು. ಸೈಕಲ್ ಮೇಲಕ್ಕೆ ಹಾರಿದ ರಭಸಕ್ಕೆ ನಾನು ಬಲ್ಲೆಗೆ ಬಿದ್ದ ಕಾರಣ ಪ್ರಜ್ಞೆ ತಪ್ಪಲಿಲ್ಲ. ಮೇಲೆ ಏಳೋಣ ಎಂದು ಎದ್ದರೆ ಬೆನ್ನಿನಲ್ಲಿ ಕಾಲಿನಲ್ಲಿ ಶಕ್ತಿ ಇಲ್ಲದ ಕಾರಣ ಅಲ್ಲೇ ಬಿದ್ದೆ ಬಿಟ್ಟೆ. ಒಟ್ಟಿನಲ್ಲಿ ಸೈಕಲ್ ನ ಜೊತೆ ನಾನು ಪಂಚರ್ ಆಗಿದ್ದೆ.
ನನ್ನ ಸಾಹಸವನ್ನು ಲೈವ್ ವೀಕ್ಷಿಸಿದ ವಿಶ್ವ ಅಣ್ಣ ಕೂಡಲೇ ಬಿದ್ದ ಸ್ಥಳಕ್ಕೆ ಬಂದು ಕೆಲಸಕ್ಕೆ ತಂದಿದ್ದ ಬಾಟಲಿ ನೀರು ಕೊಟ್ಟರು. ಎಂಥ ಭಟ್ರೆ, ಸೇತುವೆಗೆ ಮೊದಲೇ ಸೈಡ್ ಕಟ್ಟೆಗಳು ಇಲ್ಲ. ಇಳಿಜಾರಿನಲ್ಲಿ ಇಷ್ಟು ಫಾಸ್ಟ್ ಬಂದರೆ ಹೇಗೆ ಎಂದು ಹೇಳಿ. ನನ್ನ ಕೈ ಕಾಲನ್ನು ಸಲ್ಪ ಅಲ್ಲಾಡಿಸಿ ಸೇತುವೆಯಿಂದ ನನ್ನನ್ನು ಮತ್ತು ಸೈಕಲನ್ನು ಹತ್ತಿಸಿದರು. ನಂತರ ಅವರ ಸೈಕಲ್ ದೂಡಿಕೊಂಡು ನಿಮ್ಮನ್ನು ಮನೆಗೆ ಬಿಡುತ್ತೇನೆ ಎಂದು ಹೇಳಿದಾಗ ನಾನು, "ಏನು ಬೇಡ ತುಂಬಾ ಉಪಕಾರವಾಯಿತು. ನಾನೇ ಸೈಕಲ್ ತೆಗೆದುಕೊಂಡು ಹೋಗುತ್ತೇನೆ" ಎಂದು ಹೇಳಿ ಸೈಕಲ್ ದೂಡಲು ಆರಂಭಿಸಿದೆ.
ಇಳಿಜಾರಿನಲ್ಲಿ ಸೈಕಲ್ ನಲ್ಲಿ ಬರುವಾಗ ಕಿವಿಗೆ ಬಡಿಯುತ್ತಿರುವ ಶಬ್ಧ ಕೇಳಿ ತುಂಬಾ ಖುಷಿಯಾಗುತ್ತಿತ್ತು. ಈಗ ಹತ್ತುವಾಗ 'ಕರ್ ಕರ್' ಶಬ್ಧ ಕೇಳುತ್ತಿದೆ. ನೋಡುತ್ತೇನೆ ಸೈಕಲ್ ಚೈನ್ ತಪ್ಪಿದೆ. ಒಟ್ಟಿನಲ್ಲಿ ಸೈಕಲ್ ಪರಿಸ್ಥಿತಿ ಕೋಮಾಕ್ಕೆ ಹೋಗಿದೆ ಎನ್ನುವುದು ಖಚಿತವಾಯಿತು. ಆದರೂ ಕಷ್ಟಪಟ್ಟು ದೂಡಿಕೊಂಡು ಬಂದು ಮನೆ ಹೊರಗಡೆ ಇಟ್ಟು ಸೋಪಾದಲ್ಲಿ ಬಿದ್ದುಕೊಂಡೆ.
ಬಿದ್ದವವನೇ ನಮ್ಮ ಗಣಿತ ಸರ್ ಗೆ ಶಾಪ ಹಾಕಲು ಆರಂಭಿಸಿದೆ. ಪ್ರತಿ ಶನಿವಾರ ಮಧ್ಯಾಹ್ನದ ಬಳಿಕ ವಿಶೇಷ ತರಗತಿ ಮಾಡುತ್ತಿದ್ದರು. ಆದರೆ ಇವತ್ತು ತರಗತಿ ಮಾಡದ ಕಾರಣ ಸಂಕದಿಂದ ಬಿದ್ದಿದ್ದೇನೆ ಎಂದು ಮನಸಲ್ಲೇ ಶಪಿಸುತ್ತಾ ದೇವರೇ ದೊಡ್ಡವನು ಎಂದು ಕಣ್ಣುಮುಚ್ಚಿಕೊಂಡು ಆದ ಘಟನೆಯನ್ನು ಮೆಲುಕು ಹಾಕಿ ಅಪ್ಪನಿಗೆ ಹೇಗೆ ಹೇಳುವುದು ಎಂದು ಆಲೋಚನೆ ಮಾಡುತ್ತಿದ್ದೆ. ಆ ವೇಳೆಗೆ ಪುರುಷಣ್ಣ ಬಂದು ಸುದ್ದಿ ಮುಟ್ಟಿಸಿದ ಪರಿಣಾಮ ನಾನು ಎದ್ದು ಬಿಟ್ಟೆ.
ನನ್ನ ಜೀವನದಲ್ಲಿ ನಡೆದ ಮರೆಯಲಾರದ ದೊಡ್ಡ ಘಟನೆ ಇದು. ಆದರೆ ನಾನು ಸೈಕಲ್ ತುಳಿಯಲು ಆರಂಭಿಸಿದ್ದು ಏಳನೇ ತರಗತಿ ರಜೆಯಲ್ಲಿ. ನನ್ನ ಆಪ್ತ ಸ್ನೇಹಿತನ ಮನೆಯಲ್ಲಿ ಎಂಟಿಬಿ ಸೈಕಲ್ ತುಳಿದು 10 ಕ್ಕೂ ಅಧಿಕ ಬಾರಿ ಬಿದ್ದು ಸೈಕಲ್ ಕಲಿತೆ. ಸೈಕಲ್ ಕಲಿತದ್ದೇ ಕಲಿತ್ತದ್ದು ಸೈಕಲ್ ಬೇಕು ಎಂದು ಹಠ ಮಾಡಲು ಆರಂಭಿಸಿದೆ. ತಂದೆಯವರು ರಾಜಕಾರಣಿಗಳಂತೆ ತರುತ್ತೇನೆ ಎಂದು ಆಶ್ವಾಸನೆ ನೀಡುತ್ತಿದ್ದರೇ ವಿನಾಃ ತರುವ ಮನಸ್ಸು ಮಾಡಲಿಲ್ಲ. ನೀಡಿದ ಭರವಸೆ ಈಡೇರುವುದಿಲ್ಲ ಎನ್ನುವುದು ಖಚಿತವಾದಂತೆ ಸ್ನೇಹಿತರ ಜೊತೆ ಸೇರಿ ಬಾಡಿಗೆ ಸೈಕಲ್ ತುಳಿಯುವ ಮೂಲಕ ಸೈಕಲ್ ತುಳಿಯುವ ದಾಹವನ್ನು ಈಡೇರಿಸಿಕೊಳ್ಳುತ್ತಿದ್ದೆ.
ಆಗ ಗಂಟೆಗೆ 10 ರೂ. ನೀಡಿದರೆ ಬಾಡಿಗೆ ಸೈಕಲ್ ಸಿಗುತಿತ್ತು. ನೆಂಟರು ನೀಡಿದ ಹಣವನ್ನು ಮಗರಾಯ ಈ ರೀತಿ ಖರ್ಚು ಮಾಡುತ್ತಿದ್ದಾನೆ ಎಂದು ತಿಳಿದು ನಮ್ಮ ಅಪ್ಪ ಪುತ್ತೂರಿನಿಂದ ಅವರ ಬಳಿ ಇದ್ದ ಹರ್ಕ್ಯೂಲಸ್ ಕಂಪನಿಯ ಹಳೆಯ ಸೈಕಲನ್ನು ಬಾಡಿಗೆ ಲಾರಿಯಲ್ಲಿ ಸಂಪಾಜೆಗೆ ತಂದರು. ಸೈಕಲ್ ಬಂದ ದಿನ ನನಗೆ ಅಂತು ಖುಷಿಗೆ ಪಾರವೇ ಇರಲಿಲ್ಲ. ನಂತರ ನಮ್ಮ ಮನೆಯ ಹತ್ತಿರ ಗ್ಯಾರೇಜ್ ಸೈಕಲ್ ನ್ನು ಸೇರಿಸಿ ಸ್ವಲ್ಪ ಅದನ್ನು ಅಲ್ಟರ್ ಮಾಡಿದ ದಿನ ಅಂತು ರಾತ್ರಿ ನಿದ್ದೆಯೇ ಬರಲಿಲ್ಲ.
ಸೈಕಲ್ ನನಗೆ ಕೊಟ್ಟದ್ದು ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೇ ಆಗಿತ್ತು. ಶಾಲೆಗೆ ಹೋಗುವ ಮೊದಲು ಬಂದ ನಂತರವೂ ಸೈಕಲ್ತುಳಿಯುತ್ತಿದ್ದೆ. ಚೆನ್ನಾಗಿ ಬರುತ್ತದೆ ಎಂದು ಗೊತ್ತಾದ ಮೇಲೆ ಸಣ್ಣ ಮಕ್ಕಳನ್ನು ಕೂರಿಸಿ ಡಬಲ್ ರೈಡಿಂಗ್ ಮಾಡುವ ಮೂಲಕ ದೊಡ್ಡ ಜನ ಆಗುತ್ತಿದ್ದೆ.
ಇನ್ನು ಮನೆಗೆ ಸೈಕಲ್ ಮೂಲಕವೇ ಅಕ್ಕಿ, ಇತರ ಸಾಮಾಗ್ರಿಗಳನ್ನು ತರುತ್ತಿದ್ದೆ. ನೆಂಟರು ಯಾರದರೂ ಬರುತ್ತಾರೆ ಎಂದು ತಿಳಿದರೆ ಅಮ್ಮ ನನ್ನ ಜೊತೆ ಹೇಳಿ ತರಕಾರಿ ಮತ್ತು ಇತರ ಸಮಾಗ್ರಿಗಳನ್ನು ತರಲು ಹೇಳುತ್ತಿದ್ದರು. ಈ ರೀತಿ ಹೇಳಿದಾಗ ನನಗೆ ಮನೆಯ ಯಜಮಾನನ ಸ್ಥಾನದಲ್ಲಿ ಕುಳಿತ ಅನುಭವ ಆಗುತಿತ್ತು. ಬಾಲ್ಯದಲ್ಲಿ ಅಕ್ಕನಿಗೆ ಮತ್ತು ನನಗೆ ಮನೆಯಲ್ಲಿ ಜಗಳ ಆಗುತಿತ್ತು. ಈ ವೇಳೆ ಅವಳು," ನಾನು ಮನೆಯಲ್ಲಿ ಆಡುಗೆ ಮಾಡುತ್ತೇನೆ" ಎಂದು ನನ್ನ ಮುಂದೆ ಜಂಬ ಕೊಚ್ಚಿಕೊಳ್ಳುತ್ತಿದ್ದಾಗ ," ಏನ್ ಅಡುಗೆ ಮಾಡ್ತೀಯಾ ನಾನು ಸೈಕಲ್ ನಲ್ಲಿ ಹೋಗಿ ತರದೇ ಇದ್ದರೆ ನಿನಗೆ ಅಕ್ಕಿಯೂ ಇಲ್ಲ, ಸಕ್ಕರೆಯೂ ಇಲ್ಲ ಅಡುಗೆ ಆಗ್ತಿರಲಿಲ್ಲ ಎಂದು ನಾನು ನನ್ನ ಸ್ಟೈಲ್‌ನಲ್ಲಿ ಉತ್ತರ ಕೊಡುತ್ತಿದ್ದೆ.
ಮನೆಯಲ್ಲಿ ನಾನು ಉಗ್ರ ಪ್ರತಾಪ ತೋರಿಸುತ್ತಿದ್ದರೆ ಶಾಲೆಯ ಗ್ರೌಂಡಿನಲ್ಲಿ ಸ್ನೇಹಿತರ ಜೊತೆ ಸೇರಿಕೊಂಡು ಕಿತಾಪತಿ ಮಾಡುತ್ತಿದ್ದೆ. ಗಣರಾಜ್ಯೋತ್ಸವ ದಿನದಂದು ಪೊಲೀಸರು ಬುಲೆಟ್ ಬೈಕ್‌ನಲ್ಲಿ ಸಾಹಸ ಮಾಡುತ್ತಾರೆ ನೋಡಿ. ಇದೇ ಪ್ರೇರಣೆಯಾಗಿ ನಮ್ಮ 'ಹೈ ಪವರ್ ಫುಲ್ ಬುಲೆಟ್' ನಲ್ಲಿ ನಾಲ್ಕು ಜನರನ್ನು ಕೂರಿಸಿಕೊಂಡು ಸಾಹಸಗಳನ್ನು ಮಾಡುವ ಮೂಲಕ ನಾವು ಅವರಿಗಿಂತ ಕಮ್ಮಿಯಿಲ್ಲ ಎಂದು ಬೀಗುತ್ತಿದ್ದೇವು.
ಈಗ ನಾನು ಆರಂಭದಲ್ಲಿ ಪೀಠಿಕೆ ಹಾಕಿದ ವಿಚಾರಕ್ಕೆ ಬರುತ್ತೇನೆ. ಸೈಕಲ್ ನಿಂದ ಬಿದ್ದ ವಿಚಾರ ತಮ್ಮ ಪಿತಾಜಿಗೆ ಗೊತ್ತಾದರೆ ಭರ್ಜರಿಯಾಗಿ 'ಸನ್ಮಾನ' ಸಿಗುತ್ತದೆ ಎನ್ನುವುದು ನನಗೆ ಗೊತ್ತಿತ್ತು. ಆದರೆ ಆ ಶನಿವಾರ ರಾತ್ರಿ ಫುಲ್ ಜ್ವರ. ಜ್ವರ ಬಂದ ಹಿನ್ನೆಲೆಯಲ್ಲಿ ಎರಡು ಟೀಶರ್ಟ್ ಅದರ ಮೇಲೆ ಜರ್ಕಿನ್ ಕೋಟ್ ಹಾಕಿ 'ಸನ್ಮಾನ ಸಮಾರಂಭ'ಕ್ಕೆ ಸಿದ್ದನಾಗಿ ಮಲಗಿದ್ದೆ. ಅಪ್ಪ ರಾತ್ರಿ ಮನೆಗೆ ಬಂದವರೇ ಒಂದೇ ಬಾರಿಗೆ 'ಅಭಿನಂದನಾ ಮತ್ತು ಸಂಸ್ಮರಣಾ ಭಾಷಣ' ಮಾಡಿದರು. ನಂತರ ಮನೆಯಯಲ್ಲಿದ್ದ ಎನರ್ಜಿನ್ ಮಾತ್ರೆಯನ್ನು ನೀಡುವ ಮೂಲಕ 'ಕಿರು ಕಾಣಿಕೆ' ಸಮರ್ಪಿಸಿದರು. ಪುಣ್ಯ ಜ್ವರದಿಂದಾಗಿ 'ಸನ್ಮಾನ' ತಪ್ಪಿತು ಎಂದು ಮನಸಿನಲ್ಲೇ ಸಮಾಧಾನ ಪಟ್ಟುಕೊಂಡೆ.
ಬೈಗುಳ ಕೇಳಿದಾಗಲೇ ಸೈಕಲ್ ಅಂತು ಸದ್ಯಕ್ಕೆ ರಿಪೇರಿ ಆಗುವುದಿಲ್ಲ ಎನ್ನುವುದು ಖಚಿತವಾಯಿತು. ಆ ದಿನ ರಾತ್ರಿಯೇ ಮನೆಯ ಒಳಗಡೆ ಸೇರಿದ ಸೈಕಲ್ ಮತ್ತೆ ಎರಡು ತಿಂಗಳ ನಂತರ ಪುತ್ತೂರಿಗೆ ಹೋಯಿತು. ಇಲ್ಲಿಂದ ತಪ್ಪಿದ ನನ್ನ ಹರ್ಕ್ಯೂಲಸ್ ಸೈಕಲ್ ಸಂಪರ್ಕ ಮತ್ತೆ ಆಗಲೇ ಇಲ್ಲ. ಪುತ್ತೂರಿನ ಅಪ್ಪನ ಆಫೀಸ್‌ಗೆ ಹೋದಾಗ ಅಲ್ಲಿ ಪಾರ್ಕಿಂಗ್ ಏರಿಯಾದಲ್ಲಿ ಆ ಸೈಕಲ್ ನೋಡಿದಾಗ ಆ ಸೈಕಲ್ ನಲ್ಲಿ ಮಾಡಿದ ಕಿತಾಪತಿಗಳು ನೆನಪಾಗುತಿತ್ತು.
ಸೈಕಲ್ ಇದ್ದಾಗ ರಾಜನಂತೆ ಕಲ್ಲುಂಗುಡಿಯ ಪೇಟೆಯಲ್ಲಿ ರೌಂಡ್ ಹೊಡೆಯುತ್ತಿದ್ದ ನನಗೆ ನಂತರ ಬರೀ ಕಾಲಿನಲ್ಲಿ ಹೋಗುವಾಗ ಆರಂಭದಲ್ಲಿ ನಮ್ಮ ಸ್ಟಾಂಡರ್ಡ್ ಧಕ್ಕೆ ಬಂದಾಗ ಹಾಗೆ ಆಗುತ್ತಿತ್ತು. ಆದರೆ ನಮ್ಮ ಕಿತಾಪತಿಯ ವಿಚಾರ ಊರಿನ ಕೆಲವೇ ಕೆಲ ಮಂದಿಗೆ ತಿಳಿದ ಕಾರಣ ಮರ್ಯಾದೆ ಹೋಗಿಲ್ಲ ಎಂದು ಮನಸಿನಲ್ಲೇ ಸಮಾಧಾನ ಪಟ್ಟುಕೊಳ್ಳುತ್ತಿದ್ದೆ.

ಕಾಮೆಂಟ್‌ಗಳು