ಪೋಸ್ಟ್‌ಗಳು

ತುಂತುರು ಮಳೆಯ ಜೊತೆ ರಾತ್ರಿ ಬೈಕ್ ಪ್ರವಾಸ

ಇಮೇಜ್
ಕಳೆದ ವರ್ಷ ಗಂಡಿಕೋಟ, ಬೇಲುಂ ಬೈಕ್ ಟ್ರಿಪ್ ಮುಗಿಸಿ ಹೊಸಕೋಟೆ ಟೋಲ್ ಬಳಿ ನಿಂತಾಗ ಮುಂದಿನ ವರ್ಷ ಯಾವ ಕಡೆಗೆ ಹೋಗಬೇಕು ಎಂಬ ಬಗ್ಗೆ ಚರ್ಚೆ ನಡೆಯುವಾಗ ಪಟಕ್ ಅಂತ ಹೊಳೆದದ್ದೇ ವಯನಾಡ್. ಬೈಕಿನಲ್ಲೇ ಕರ್ನಾಟಕದ ಸಮೀಪದ ರಾಜ್ಯಗಳನ್ನು ಸುತ್ತಬೇಕು ಎನ್ನುವ ಮಹತ್ವಾಕಾಂಕ್ಷೆಯ ಯೋಜನೆ ಹಾಕಿಕೊಂಡ ಹಿನ್ನೆಲೆಯಲ್ಲಿ ತಮಿಳುನಾಡು(ಯೆರ್ಕಾಡ್, ಹೊಗೆನಕಲ್) ಕರ್ನಾಟಕ(ಹಾಸನ, ಚಿಕ್ಕಮಗಳೂರು), ಆಂಧ್ರಪ್ರದೇಶ(ಲೇಪಾಕ್ಷಿ, ಗಂಡಿಕೋಟ, ಬೇಲುಂ) ಸುತ್ತಿಯಾಗಿತ್ತು. ಹೀಗಾಗಿ ಕೇರಳ ಒಂದು ಬಾಕಿ ಇತ್ತು.  ಈ ಕಾರಣಕ್ಕೆ ವಯನಾಡನ್ನು ಬೈಕಿನ ಮೇಲೆ ಕುಳಿತು ಅಲ್ಲೇ ಫೈನಲ್ ಮಾಡಿದೆವು. ಒಂದು ವರ್ಷದ ಜಾಗ ಫೈನಲ್ ಆದ್ರೂ ದಿನಾಂಕ ಅಂತಿಮವಾಗಿರಲಿಲ್ಲ. ಕೊನೆಗೆ 3 ತಿಂಗಳ‌ ಹಿಂದೆ ಅ.12,13 ಹೋಗುವುದಾಗಿ ನಿಶ್ಚಯಿಸಲಾಯಿತು. ಪ್ರತಿ ಬಾರಿಯೂ ಮುಂಜಾನೆ 4 ಗಂಟೆಗೆ ನಮ್ಮ ಪ್ರಯಾಣ ಆರಂಭವಾಗುತಿತ್ತು. ಯಾವಾಗಲೂ ಒಂದೇ ರೀತಿ ಇದ್ದರೆ ಚೆನ್ನಾಗಿ ಇರುವುದಿಲ್ಲವಲ್ಲ. ಹೀಗಾಗಿ ಈ‌ ಬಾರಿ ಬದಲಾವಣೆ ಇರಲಿ ಎನ್ನುವ ಕಾರಣಕ್ಕೆ ರಾತ್ರಿ ಪ್ರಯಾಣಕ್ಕೆ ನಾವು ಜೈ ಎಂದ್ವಿ. ನಿಗದಿಯಂತೆ ಕೆಂಗೇರಿ ನೈಸ್ ರಸ್ತೆಯ ಮುಂದಿರುವ ಕದಂಬ ಹೋಟೆಲಿಗೆ ಶುಕ್ರವಾರ  ರಾತ್ರಿ 7:30ರ ಒಳಗೆ ಎಲ್ಲರೂ ಬರುವುದು. ಅಲ್ಲಿ ಟೀ ಕುಡಿದು ರಾತ್ರಿ 10 ಗಂಟೆಗೆ ಮೈಸೂರು ಹೋಟೆಲ್ ತಲುಪಿ ಮುಂಜಾನೆ ಅಲ್ಲಿಂದ ಹೊರಡುವ ಪ್ಲಾನ್ ಮಾಡಿಕೊಂಡಿದ್ದೆವು.ರಾತ್ರಿ ನಿಗದಿಯಾದ ಸಮಯದ ಒಳಗಡೆ 5 ಜನ ಹೋಟೆಲಿನಲ್ಲಿ ಇದ್

ಆಂಧ್ರ ಪ್ರವಾಸ ಕಥನ 3 - ಬೇಲುಂ ಗುಹೆ

ಇಮೇಜ್
ಗುಹೆಯಲ್ಲಿ ಆದಿಮಾನವರು ವಾಸವಾಗಿದ್ದರಂತೆ, ಗೆಡ್ಡೆ ಗೆಣಸು ತಿಂದು ಬದುಕಿದ್ದರಂತೆ. ಮುನಿಗಳು‌ ತಪಸ್ಸು ಮಾಡಿದ್ದರಂತೆ.ಹೀಗೆ ಅಂತೆ ಕಂತೆಗಳ ಕಥೆಗಳನ್ನು ಕೇಳಿದ್ದ ನಾನು ಇದೂವರೆಗೂ ಯಾವುದೇ ಗುಹೆಯನ್ನು ಹೊಕ್ಕಿರಲಿಲ್ಲ. ವಿಡಿಯೋಗಳನ್ನು ನೋಡಿದಾಗ ಹೀಗೆಲ್ಲ ಇರುತ್ತಾ ಅಂತ ಭಾವಿಸಿದ್ದ ನನಗೆ ಈ ಬಾರಿಯ ಪ್ರವಾಸದಲ್ಲಿ ಗುಹೆಯನ್ನು ಪ್ರವೇಶಿಸುವ ಭಾಗ್ಯ ಸಿಕ್ಕಿತ್ತು. ಬೇಲುಂ ಗುಹೆ ನಾವು ಭೇಟಿ ನೀಡಿದ ಮೂರನೇ ಸ್ಥಳ. 10 ಮೀಟರ್ ನಿಂದ ಪ್ರಾರಂಭವಾಗಿ 30 ಮೀಟರ್ ಆಳದವರೆಗೆ ಸುಮಾರು 1.5. ಕಿಮೀ.ದೂರವನ್ನು ಗುಹೆಯಲ್ಲಿ ಸಂಚರಿಸಬಹುದು.ಆರಂಭದಲ್ಲಿ ವಿಶಾಲವಾಗಿರುವ ಸುರಂಗದ ದಾರಿಯಲ್ಲಿ ಸಾಗುತ್ತಾ ಹೋದಂತೆ ಇಕ್ಕಟ್ಟಾಗುತ್ತದೆ. 'Young and Evergreen Hero' ಆಗಿರುವ ನನ್ನಂತವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ದಪ್ಪ ಇದ್ದವರಿಗೆ ಕೆಲವು ಕಡೆ ಸಂಚರಿಸಲು ಕಷ್ಟವಾಗಬಹುದು. ಮೇಲೆ ಹತ್ತಲು ಮತ್ತು ಕೆಳಗೆ ಇಳಿಯಲು ಸಣ್ಣ ಕಬ್ಬಿಣದ ಮೆಟ್ಟಿಲುಗಳಿವೆ. ನುಸುಳಿಕೊಂಡು ಹೋಗಬೇಕಾಗುತ್ತದೆ‌. ಗುಹೆಯಲ್ಲಿ ಸಂಪೂರ್ಣ ಕತ್ತಲು ಇರುವ ಕಾರಣ ಬೆಳಕಿನ ವ್ಯವಸ್ಥೆ ಇದೆ. ಬೆಳಕಿನ ವ್ಯವಸ್ಥೆಯನ್ನು ನೋಡಿಕೊಂಡು ಮುಂದೆ ಸಾಗಬಹುದು. ಸ್ವಲ್ಪ ದೂರ ಹೋದಂತೆ ಗುಹೆ ಮೂರು‌ ಭಾಗವಾಗಿ ಕವಲೊಡೆದಿದೆ. ಒಂದು ಸಣ್ಣ ರೂಮ್, ಇನ್ನೊಂದು ಮಂಟಪ, ಮತ್ತೊಂದು ನೀರಿನ ಬಾವಿ ಇರುವ ಪಾತಾಳ ಗಂಗಾ ಎಂಬ ಜಾಗಕ್ಕೆ ಹೋಗುತ್ತದೆ‌. ಇದರಲ್ಲಿ ಪಾತಾಳ ಗಂಗಾ ಜಾಗಕ್ಕೆ ಹೋಗಲು ಸ

ಆಂಧ್ರ ಪ್ರವಾಸ ಕಥನ - ಲೇಪಾಕ್ಷಿ ದೇವಾಲಯ

ಇಮೇಜ್
ಕರ್ನಾಟಕದ ಗಡಿ ರಾಜ್ಯಗಳನ್ನು ಬೈಕಿನಲ್ಲಿ ಸುತ್ತುವ ಒಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ನಾವು ಹಾಕಿಕೊಂಡಿದ್ದು ಕಳೆದ ಬಾರಿ ತಮಿಳುನಾಡಿನಲ್ಲಿರುವ ಯೆರ್ಕಾಡ್ ಮತ್ತು ಹೊಗೆನಕಲ್ ಗೆ ಹೋಗಿದ್ವಿ. ಈ ಬಾರಿ ಯಾವ ಕಡೆ ಎಂದು ಪ್ಲಾನ್ ಮಾಡುವಾಗ ಹೊಳೆದದ್ದೆ ಆಂಧ್ರ. ನಾವು ಐದು ಮಂದಿ ಜೈ ಎಂದಿದ್ದೆ ತಡ ಮೂರು ತಿಂಗಳ ಹಿಂದೆ ಫಿಕ್ಸ್ ಆಗಿದ್ದ ನವೆಂಬರ್ 10 ರ ಬೆಳಗ್ಗೆ 5 ಬೈಕಿನಲ್ಲಿ ನಮ್ಮ‌ ಸವಾರಿ ಹೊರಟಿತು. ಎಸ್ಟೀಮ್ ಮಾಲ್ ನಮ್ಮ ಸ್ಟಾಟಿಂಗ್ ಪಾಯಿಂಟ್. ಮೊದಲು ಭೇಟಿ ನೀಡುವ ಸ್ಥಳ ಲೇಪಾಕ್ಷಿ ದೇವಾಲಯ. ಬೆಂಗಳೂರಿನಿಂದ 130ಕಿ.ಮೀ ದೂರದಲ್ಲಿ ಈ ದೇವಾಲಯವಿದ್ದು ಹೈದರಾಬಾದ್ ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಸಾಗಿ ಬಾಗೇಪಲ್ಲಿಯಲ್ಲಿ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಈ ದೇವಾಲಯ ಸಿಗುತ್ತದೆ. ರಸ್ತೆ ಚೆನ್ನಾಗಿದ್ದರಿಂದ ಬೆಳಗ್ಗೆ 8.30ಕ್ಕೆ ಈ ದೇವಾಲಯದ ಪಾರ್ಕಿಂಗ್ ಜಾಗದಲ್ಲಿ ನಮ್ಮ ಬೈಕ್ ಲ್ಯಾಂಡ್ ಆಯಿತು. ಈ ದೇವಾಲಯದ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದ್ರೆ ಬಹಳಷ್ಟು ಮಾಹಿತಿ ಸಿಗುತ್ತದೆ. ಹೀಗಾಗಿ ಜಾಸ್ತಿ ಬರೆಯಲು ಹೋಗಲ್ಲ. ಆದರೂ ಕೆಲವೊಂದು ಮುಖ್ಯವಾದ ವಿಚಾರ ಹೇಳಲೇಬೇಕಾಗುತ್ತದೆ. ಈ ದೇವಾಲಯಕ್ಕೆ ರಾಮಾಯಣದ ನಂಟು ಇದೆ. ಅಷ್ಟೇ ಅಲ್ಲದೇ ವಿಜಯನಗರಕ್ಕೂ ಸಂಬಂಧವಿದೆ. ರಾಮಾಯಣದ ಕಥೆ ನಿಮಗೆ ಗೊತ್ತಿರಬಹುದು. ವನವಾಸದ ಸಮಯದಲ್ಲಿ ಸೀತೆಯನ್ನು ರಾವಣ ಅಪಹರಿಸಿ ಪುಷ್ಪಕ ವಿಮಾನದಲ್ಲಿ ಲಂಕೆಗೆ ಹೋಗುತ್ತಿದ್ದಾಗ ಜಠಾಯು ಹೋರಾಟ ಮಾಡುತ್ತದೆ. ಉಗ್ರ

ಆಂಧ್ರ ಪ್ರವಾಸ ಕಥನ- ಗಂಡಿಕೋಟ

ಇಮೇಜ್
ನದಿ, ಕಣಿವೆ, ಕಲ್ಲುಬಂಡೆಗಳು, ಕೋಟೆ, ಉಗ್ರಾಣ, ಪುಷ್ಕರಿಣಿ, ಸುರ್ಯೋದಯ, ಸೂರ್ಯಾಸ್ತಮಾನ, ಬೋಟಿಂಗ್,  ದೇವಾಲಯ, ಮಸೀದಿ  ಎಲ್ಲವನ್ನು ಒಂದೇ ಕಡೆ ನೋಡಬೇಕೇ? ಹಾಗಾದರೆ ನೀವು ಕಡಪ ಜಿಲ್ಲೆಯಲ್ಲಿರುವ ಗಂಡಿಕೋಟ ಸ್ಥಳಕ್ಕೆ ಹೋಗಬೇಕು‌. 'Grand Canyon of India' ಎಂದೇ ಹೆಸರಾಗಿರುವ ಇಲ್ಲಿ ಪೆನ್ನಾರ್ ನದಿ ಹರಿಯುತ್ತಿದ್ದು ಸುತ್ತಲು ಕಣಿವೆ ಇದೆ.  ನೀರು ಹತ್ತಿರದಲ್ಲೇ ಇರುವ ಕಾರಣ ವಿಜಯನಗರದ  ಸಾಮಂತ ರಾಜನಾಗಿದ್ದ ಕುಮಾರ ತಿಮ್ಮಾ ಇಲ್ಲಿ ಕೋಟೆ ಕಟ್ಟಿದ್ದು ಈಗಲೂ ನೋಡಬಹುದು. ಕೋಟೆಯಲ್ಲಿ ಏನಿದೆ? 50 ಅಡಿ ಎತ್ತರ, ಸುಮಾರು 7-8 ಕಿ‌‌ಮೀ ಸುತ್ತಳತೆಯ ಗಟ್ಟಿಯಾದ ರಕ್ಷಣಾ ಗೋಡೆಯಿದೆ. ಕಲ್ಲುಗಳನ್ನು ಬೆಲ್ಲ ಮತ್ತು ಸುಣ್ಣ ಬಳಸಿ ಕಟ್ಟಲಾಗಿದೆ. ಪ್ರವೇಶದ್ವಾರ ದಾಟಿ ಮುಂದೆ ಹೋದರೆ ಮದ್ದುಗುಂಡು ಸಂಗ್ರಹಾಗಾರ, ಉಗ್ರಾಣಗಳು, ಜೈಲು, ಮಾಧವ ಮತ್ತು ರಂಗನಾಥ ದೇವಾಲಯ, ರಾಣಿ ಮಹಲ್, ಪುಷ್ಕರಣಿ, ಚಾರ್ ಮೀನಾರ್, ಜುಮ್ಲಾ ಮಸೀದಿ ಇದೆ‌. ಮೇಲೆ ತಿಳಿಸಿದ ಜೊತೆ ಜನರನ್ನು ಹೆಚ್ಚು ಸೆಳೆಯುವುದು ಇಲ್ಲಿನ ಕಲ್ಲು ಬಂಡೆಗಳು ಮತ್ತು ಕಣಿವೆಗಳು.ಸುರ್ಯೋದಯ ಮತ್ತು ಸುರ್ಯಾಸ್ತಮಾನ ಎರಡನ್ನು ಕಣ್ತುಂಬಿಕೊಳ್ಳುವ ಕಾರಣ ಇಲ್ಲಿಗೆ ಪ್ರವಾಸಿಗರು‌ ಹೆಚ್ಚಾಗಿ ಬರುತ್ತಾರೆ. ಫೋಟೋಗ್ರಫಿಗೆ ಬೇಕಾದ ಎಲ್ಲ ಪೂರಕ ಅಂಶಗಳು ಒಂದೇ ಕಡೆ ಸಿಗುವ ಕಾರಣ ಫೋಟೋಗ್ರಾಫರ್ ಗಳು  ಸಹ ಜಾಸ್ತಿ ಸಂಖ್ಯೆಯಲ್ಲಿ ಬರುತ್ತಾರೆ. ಎಲ್ಲವೂ ಚೆನ್ನಾಗಿದ್ದರೂ ಇಲ್ಲಿ  ರಾತ್

ನಾನು ಓದಿದ ಶಾಲೆಗೆ 100ರ ಸಂಭ್ರಮ!

ಇಮೇಜ್
(ಡಿಸೆಂಬರ್  28, 2014ರಲ್ಲಿ ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಪೋಸ್ಟ್) ನಾನು ಕಲಿತ ಸಂಪಾಜೆಯ ಪ್ರಾಥಮಿಕ ಶಾಲೆ ಈ ವರ್ಷ ಶತಮಾನೋತ್ಸವ ಸಂಭ್ರಮದಲ್ಲಿದೆ. ನೂರರ ಸಂಭ್ರಮದಲ್ಲಿರುವ ಈ ಶಾಲೆಯಲ್ಲಿ ಕಲಿತ 89ನೇ ಬ್ಯಾಚ್ ನಮ್ಮದು. ಸ್ಟುಡೆಂಟ್‌ ಲೈಫ್‌ ಇಸ್ ಗೋಲ್ಡನ್ ಲೈಫ್ ಅಂ ತ ಹೇಳುತ್ತಾರೆ. ಈ ವಾಕ್ಯಕ್ಕೆ ಕರೆಕ್ಟ್ ಆಗಿ ಸೂಟ್ ಆಗಿ ನನ್ನ ಲೆಕ್ಕದಲ್ಲಿ ಪ್ರಾಥಮಿಕ ಶಾಲೆ ಲೈಫು. ಇಲ್ಲಿ ಆಗುವಷ್ಟು ಸಿಹಿ ನೆನಪುಗಳು ಬೇರೆ ಎಲ್ಲಿಯೂ ಆಗುವುದಿಲ್ಲ. ನಾವು ಮಾಡುವ ಕಿತಾಪತಿಗಳು, ಅದಕ್ಕೆ ಶಿಕ್ಷಕರ ಪೆಟ್ಟುಗಳು ಇದು ಒಂದು ಕಡೆಯಾದರೆ, ಆಟಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು,ಪ್ರವಾಸ ... ಹೀಗೆ 'ಗೋಲ್ಡನ್ ಲೈಫು' ಪಟ್ಟಿ ಮುಂದುವರೆಯುತ್ತಾ ಹೋಗುತ್ತದೆ. ನಮ್ಮ ಸಮಯದಲ್ಲಿ ಈಗ ಇರುವಂತೆ ಇರುವ ಅಂಥ ಕಠಿಣ ನಿಯಮಗಳೇನು ಇರಲಿಲ್ಲ. ತಪ್ಪು ಮಾಡಿದ್ರೆ ಪೆಟ್ಟು ಗ್ಯಾರಂಟಿ. ನನಗೆ ಈಗಲೂ ನೆನಪಿದೆ. 'ಸಮುದಾಯದತ್ತ ಶಾಲೆ' ಆರಂಭಗೊಂಡದ್ದು ನಮ್ಮ ಅವಧಿಯಲ್ಲಿ. ಈ ಸಮಯದಲ್ಲಿ ತರಗತಿ ಟೀಚರ್‍ ಗಳೊಂದಿಗೆ ಮಧ್ಯಾಹ್ನ ೨.೩೦ರಿಂದ ಸಾಧಾರಣ ೪.೩೦ರವರೆಗೆ ಪೋಷಕರ ಮಕ್ಕಳೊಂದಿಗೆ ಮಾತುಕತೆ. ಹುಡುಗರ ಪೋಷಕರಂತೂ "ಟೀಚರ್‍ ನೀವು ಹೊಡೆಯುವುದು ಕಡಿಮೆಯಾಗಿದೆ. ಸರಿಯಾಗಿ ಹೊಡೆಯಿರಿ, ನೀವು ಏನು ಚಿಂತೆ ಮಾಡಬೇಡಿ. ಮನೆಯಲ್ಲಿ ನಮ್ಮ ಮಾತು ಕೇಳುವುದೇ ಇಲ್ಲ' ಎಂದು ಪೋಷಕರೇ ಟೀಚರ್‌ ಗಳಿಗೆ ಹೊಡೆಯುವಂತೆ ಉತ್ತೇಜನ ನೀಡುತ್ತಿದ್ದರು. ಈಗ ಇದು ಉಲ್ಟಾ

ತಮಿಳುನಾಡು ಬೈಕ್ ಟ್ರಿಪ್ ಭಾಗ -2 ಹೊಗೇನಕಲ್ ಪ್ರವಾಸ ಕಥನ

ಇಮೇಜ್
ಹೊಗೇನಕಲ್ ತಲುಪಿದ್ದೆ ತಡ ಸ್ಟಾಪ್, ಸ್ಟಾಪ್, ಸ್ಟಾಪ್... ಅಂತ ಹೇಳಿ ಒಂದು 12 ಮಂದಿ ಸದಸ್ಯರು ನಮ್ಮನ್ನು ಅಡ್ಡ ಹಾಕಿದ್ರು. ಪೊಲೀಸರು ಆದರೆ ಸಮವಸ್ತ್ರದಲ್ಲಿ ಇರುತ್ತಾರೆ. ಆದರೆ ಇವರು ಯಾರು ಖಾಕಿ ಯೂನಿ ಫಾರ್ಮ್ ನಲ್ಲಿ ಇರಲಿಲ್ಲ. ಬದಲಾಗಿ ಇವರು ನೀಲಿ ಸಮವಸ್ತ್ರ ಧರಿಸಿದ್ದರು. ಮೊದಲೇ ನಮಗೆ ತಮಿಳು‌ ಬರುವುದಿಲ್ಲ.‌ ಅಷ್ಟೇ ಅಲ್ಲದೇ ತಮಿಳುನಾಡು ಬೈಕ್ ಗಳನ್ನು ಬಿಟ್ಟು ನಮ್ಮ‌ ಬೈಕ್ ಗಳನ್ನು ಮಾತ್ರ ನಿಲ್ಲಿಸಿದ್ದು ನೋಡುವಾಗ ಭಯ ಆಯ್ತು. ಕರ್ನಾಟಕ, ತಮಿಳುನಾಡಿನ ಮಧ್ಯೆ ಕಿಚ್ಚು ಹತ್ತಿ ಏನಾದ್ರೂ ಹೆಚ್ಚು ಕಡಿಮೆ ಆಗಿದ್ಯಾ ಅಂತ ಅಂದುಕೊಂಡೆವು. ಸಣ್ಣ ಪಟ್ಟಣ ಆದರೂ ಅಲ್ಲಿದ್ದ ಜನ ನಮ್ಮನ್ನೇ ನೋಡುತ್ತಿದ್ದರು. ಯಾಕೆ ಇವರು ಹೀಗೆ ವರ್ತಿಸುತ್ತಿದ್ದಾರೆ ಅನ್ನುವುದು ಗೊತ್ತೇ ಆಗಲಿಲ್ಲ. ಸ್ಥಳದಲ್ಲೇ ಒಂದೊಂದು ಬೈಕಿಗೆ ತಲಾ 10 ರೂ.ನಂತೆ ಪ್ರವೇಶ ಶುಲ್ಕ ಪಾವತಿಸಿ ಆಯ್ತು. ನಂತರ ಅಲ್ಲಿದ್ದವರು ಏನೋ ಮಾತನಾಡಿ ಕೊನೆಗೆ ಇಬ್ಬರು ನಮ್ಮ ಜೊತೆಗೆ ಓಡಿಕೊಂಡು ಬರುತ್ತಿದ್ದರು. ಯಾಕೆ ಇವರು ನಮ್ಮ ಜೊತೆ ಓಡಿಕೊಂಡು ಬರುತ್ತಿದ್ದಾರೆ ಎನ್ನುವುದು ನಮಗೆ ಅರ್ಥವೇ ಆಗಲಿಲ್ಲ. ಒಂದು 100 ಮೀಟರ್ ದೂರ ಹೋದ ನಂತರ ಅವರಿಬ್ಬರು ನಮ್ಮನ್ನು ತಡೆದು ನಿಲ್ಲಿಸಿ ಇಲ್ಲಿ ಬೈಕ್ ಪಾರ್ಕ್ ಮಾಡಿ ಎಂದು ಹೇಳಿದರು‌. ಬೈಕ್ ಪಾರ್ಕ್ ಮಾಡಿದ ಬಳಿಕ ಇಬ್ಬರಲ್ಲಿ ಒಬ್ಬರು ನಮ್ಮನ್ನು ನೇರವಾಗಿ ಲಗೇಜ್ ಕೊಠಡಿಗೆ ಕರೆದುಕೊಂಡು ಹೋದರು. ಈ ವೇಳೆ‌‌ ನೀವು ಯಾರು ಎಂದು ಕೇಳಿದಾಗ, ನಾ